ತಮಿಳು ನಟ ಶಿಂಬುಗೆ ಸೇರಿದ ಕಾರು ಅಪಘಾತ: ವೃದ್ಧ ಸಾವು.

ತಮಿಳಿನ ಖ್ಯಾತ ನಟ ಶಿಂಬು ಅವರಿಗೆ ಸೇರಿದ ಕಾರು ವೃದ್ಧರೊಬ್ಬರಿಗೆ ಡಿಕ್ಕಿ ಹೊಡೆದ ಪರಿಣಾಮ ಅವರು ಮೃತಪಟ್ಟಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಮೃತರನ್ನು ಮುನುಸ್ವಾಮಿ (70) ಎಂದು ಗುರುತಿಸಲಾಗಿದೆ. ಮಾರ್ಚ್‌ 18ರಂದು ಈ ಘಟನೆ ನಡೆದಿದ್ದು, ಅಪಘಾತದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಅನಾರೋಗ್ಯ ಪೀಡಿತರಾಗಿದ್ದ ಮುನುಸ್ವಾಮಿ ತೆವಳುತ್ತ ರಸ್ತೆ ದಾಟುತ್ತಿರುವಾಗ ಕಾರು ಅವರ ಮೇಲೆ ಹರಿದಿದೆ. ಈ ಕಾರು ಶಿಂಬು ಹೆಸರಿನಲ್ಲಿ ನೋಂದಣಿಯಾಗಿದೆ ಎಂದು ತಮಿಳುನಾಡು ಪೊಲೀಸರು ಮಾಹಿತಿ ನೀಡಿದ್ದಾರೆ.

ಸದ್ಯ ಪೊಲೀಸರು ಶಿಂಬು ತಂದೆ ರಾಜೇಂದ್ರನ್‌ ಅವರ ಕಾರು ಚಾಲಕ ಸೆಲ್ವಂ ಎಂಬುವರನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾರಿನಲ್ಲಿ ಶಿಂಬು ಇದ್ದರೇ? ಅಥವಾ ಯಾರೆಲ್ಲ ಇದ್ದರು? ಎಂಬುದರ ಬಗ್ಗೆ ತನಿಖೆ ಮಾಡಲಾಗುತ್ತಿದೆ ಎಂದು ವರದಿಯಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:
https://play.google.com/store/apps/details?id=com.nationaltv.kannada

 

Leave a Reply

Your email address will not be published. Required fields are marked *

Next Post

ಟ್ರೋಫಿ ಗೆಲ್ಲದ ತಂಡದ ಬಗ್ಗೆ ಗವಾಸ್ಕರ್ ಭವಿಷ್ಯ!

Thu Mar 24 , 2022
  ಐಪಿಎಲ್ ಟೂರ್ನಿಯ ಆರಂಭಕ್ಕೆ ಇನ್ನು ಕೆಲವೇ ಗಂಟೆಗಳು ಮಾತ್ರವೇ ಬಾಕಿಯಿದೆ. ಹೊಸ ಸ್ವರೂಪದೊಂದಿಗೆ ಕಣಕ್ಕಿಳಿಯಲು ಎಲ್ಲಾ ತಂಡಗಳು ಕೂಡ ಸಜ್ಜಾಗಿದ್ದು ಎರಡು ಹೊಸ ತಮಡಗಳು ಟೂರ್ನಿಗೆ ಸೇರ್ಪಡೆಯಾಗಿರುವ ಕಾರಣ ಟೂರ್ನಿಯ ಕಳೆ ಮತ್ತಷ್ಟು ಹೆಚ್ಚಿದೆ. ಸದ್ಯ ಕಾಗದದಲ್ಲಿ ತಂಡಗಳ ಬಲಾಬಲವನ್ನು ವಿಮರ್ಶೆ ಮಾಡಲಾಗುತ್ತಿದ್ದ ತಂಡಗಳ ಬಲಾಬಲಗಳ ಬಗ್ಗೆ ವಿಮರ್ಶಕರು ತಮ್ಮದೇ ಆದ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ಹಂತದಲ್ಲಿ ದಿಗ್ಗಜ ಕ್ರಿಕೆಟಿಗ ಹಾಗೂ ಕಾಮೆಂಟೇಟರ್ ಸುನಿಲ್ ಗವಾಸ್ಕರ್ ಕುತೂಹಲಕಾರಿ ಅಭಿಪ್ರಾಯವನ್ನು […]

ffff

February 2023
M T W T F S S
 12345
6789101112
13141516171819
20212223242526
2728  
%d bloggers like this: