2019-21ರ ಸಮೀಕ್ಷೆಯ ವರದಿ ಪ್ರಕಾರ ದೆಹಲಿ ದೇಶದ ಅತಿ ಹೆಚ್ಚು ಟಿಬಿ ಹರಡುವಿಕೆಯಲ್ಲಿ ದಾಖಲೆ ಬರೆದಿದೆ. ಹಾಗೆಯೇ ಕೇರಳ ಅತಿ ಕಡಿಮೆ ಹರಡುವಿಕೆಯ ಪ್ರಮಾಣವನ್ನು ದಾಖಲಿಸಿದೆ. ಇದೇ ಸಂದರ್ಭದಲ್ಲಿ ಶೇ 64 ರಷ್ವು ಭಾರತೀಯರಿಗೆ ಸರಿಯಾದ ಚಿಕಿತ್ಸೆ ಸಿಗದಿರುವುದು ದುರಂತವೇ ಸರಿ. ದಾಖಲೆಗಳ ಪ್ರಕಾರ 15 ಕ್ಕಿಂತ ಹೆಚ್ಚು ವಯಸ್ಸಿನವರಲ್ಲಿ ಒಂದು ಲಕ್ಷಕ್ಕೆ 316 ಜನರಲ್ಲಿ ಈ ಖಾಯಿಲೆಯ ಗುಣಲಕ್ಷಣಗಳು ಕಂಡುಬಂದಿದೆ ಎಂದು ಈ ಸಮೀಕ್ಷೆ ವರದಿ ಮಾಡಿದೆ. ಅದೇ ರೀತಿ ಕೇರಳ ರಾಜ್ಯ 1 ಲಕ್ಷಕ್ಕೆ 115 ಜನರಲ್ಲಿ ಈ ಖಾಯಿಲೆಯ ಗುಣಲಕ್ಷಣ ಬಂದಿದೆ ಎಂದು ವರದಿ ಮಾಡಿದೆ. 6 ದಶಕಗಳ ನಂತರ ಈ ಸಮೀಕ್ಷೆ ನಡೆದಿದ್ದು ಇದರಿಂದ ಹೊರಬಂದಿರುವುದು ಭಯಾನಕ ಸತ್ಯ ಏನೆಂದರೆ.ಈ ಖಾಯಿಲೆಯಿಂದ ಹಿಂದೆದೂ ಆಗಿರದಷ್ವು ಅಪಾಯಕಾರಿ ತೊಂದರೆಗಳನ್ನು ಎದುರಿಸಬಹುದಾದ ಆಂತಕ ಕೂಡ ಇದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.nationaltv.kannada