ತಮಿಳು ನಟ ಸಿಲಂಬರಸನ್ ಕಾರು ಹರಿದು ವೃದ್ಧ ಸಾವು,

ತಮಿಳು ನಟ ಸಿಲಂಬರಸನ್ ಅವರ ಇನ್ನೋವಾ ಕಾರು ಢಿಕ್ಕಿ ಹೊಡೆದು ವೃದ್ಧರೊಬ್ಬರು ಸಾವನ್ನಪ್ಪಿದ್ದಾರೆ.ಮಾಧ್ಯಮಗಳ ವರದಿಯ ಪ್ರಕಾರ, ಮಾರ್ಚ್ 18 ರಂದು ಆಸ್ಪತ್ರೆಗೆ ಇನ್ನೋವಾದಲ್ಲಿ ಸಿಂಬು ಅವರ ತಂದೆ ಟಿ.ರಾಜೇಂದ್ರ ಅವರು ತಮ್ಮ ಮೊಮ್ಮಗಳೊಂದಿಗೆ ತೆರಳುತ್ತಿದ್ದ ವೇಳೆ ಅವಘಡ ನಡೆದಿದೆ.ಘಟನೆ ನಡೆದ ವೇಳೆ ಕಾರನ್ನು ಅವರ ಚಾಲಕ ಸೆಲ್ವಂ ಚಲಾಯಿಸುತ್ತಿದ್ದರು ರಾತ್ರಿ 7 ಗಂಟೆ ವೇಳೆ ಎಲಂಗೋ ಸಲೈ-ಪೋಸ್ ರಸ್ತೆಯ ತಿರುವಿನಲ್ಲಿ ರಸ್ತೆ ದಾಟುತ್ತಿದ್ದ 70 ವರ್ಷದ ಮುನುಸ್ವಾಮಿ ಎಂಬ ದಾರಿಹೋಕರಿಗೆ ಕಾರು ಢಿಕ್ಕಿ ಹೊಡೆದು ಅವರು ಸಾವನ್ನಪ್ಪಿದ್ದಾರೆ. ಘಟನೆ ತಡವಾಗಿ ಸುದ್ದಿಯಾಗುತ್ತಿದೆ.ಮೃತ ಮುನುಸ್ವಾಮಿ ಅಂಗವಿಕಲರಾಗಿದ್ದು, ರಸ್ತೆಯಲ್ಲಿ ತೆವಳುತ್ತಾ ಸಾಗುತ್ತಿರುವುದು ಸಿಸಿಟಿವಿ ದೃಶ್ಯಾವಳಿಯಲ್ಲಿ ಕಂಡುಬಂದಿದೆ. ಗಂಭೀರವಾಗಿ ಗಾಯಗೊಂಡ ವರನ್ನು ರಾಜೇಂದ್ರ ಅವರು ಕಾರಿನಿಂದ ಕೆಳಗಿಳಿದು ಆಂಬ್ಯುಲೆನ್ಸ್‌ಗೆ ಕರೆ ಮಾಡಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತನ್ನ ಚಾಲಕನನ್ನು ಹೇಳಿದ್ದಾರೆ. ಸಿಂಬು ಅವರಿಗಾಗಿ ಮತ್ತೊಂದು ಕಾರನ್ನು ಕಳುಹಿಸಿದ್ದಾರೆ ಎಂದು ವರದಿಯಾಗಿದೆ. ಮರುದಿನ ಚಾಲಕನನ್ನು ಬಂಧಿಸಲಾಗಿದೆ.ಘಟನೆಯ ಕುರಿತು ಸುಳ್ಳು ಮಾಹಿತಿಗಳನ್ನು ಹಬ್ಬಲಾಗುತ್ತಿದೆ. ಅವಘಡ ನಡೆದ ವೇಳೆ ಸಿಂಬು ಅವರು ಕಾರಿನಲ್ಲಿರಲಿಲ್ಲ, ಅವರ ವ್ಯಕ್ತಿತ್ವಕ್ಕೆ ಕಳಂಕ ತರುವ ಸುಳ್ಳು ಸುದ್ದಿಗಳನ್ನು ಹಬ್ಬಿಸಲಾಗುತ್ತಿದೆ ಎಂದು ಅವರ ಕಚೇರಿ ಹೇಳಿದೆ.

 

Leave a Reply

Your email address will not be published. Required fields are marked *

Next Post

ರಾಸುಗಳಿಗೆ ಅರವಟ್ಟಿಗೆ ಸ್ಥಾಪಿಸಿ.

Thu Mar 24 , 2022
  ಬಿಸಿಲಿನ ಪ್ರಖರತೆ ಹೆಚ್ಚಾಗುತ್ತಲಿದ್ದು, ನಗರಸಭೆ ಹಾಗೂ ಗ್ರಾಮ ಪಂಚಾಯಿತಿ ಅಧೀನದಲ್ಲಿನ ಪ್ರದೇಶಗಳಲ್ಲಿ ಜಾನುವಾರು ಹಾಗೂ ಪಕ್ಷಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಹಳ್ಳಿಗಳಲ್ಲಿ ಬಸ್ ನಿಲ್ದಾಣ ಹಾಗೂ ಇನ್ನಿತರ ಕಡೆ ನೀರಿನ ತೊಟ್ಟಿ ನಿರ್ಮಿಸಿದರೆ ಅನುಕೂಲವಾಗುತ್ತದೆ. ಅಲ್ಲದೆ, ಹಳ್ಳಿ ಹಾಗೂ ನದಿ ಪಾತ್ರದಲ್ಲಿನ ಪ್ರದೇಶಗಳಲ್ಲಿ ಕೃಷಿಗೆ ನೀರು ಸೆಳೆದುಕೊಳ್ಳಬಾರದು. ಇದರಿಂದ ಜಲಚರಗಳಿಗೆ ತೊಂದರೆ ಆಗುತ್ತದೆ. ಈ ಬಗ್ಗೆ ಅಧಿಕಾರಿಗಳು ಗಮನಹರಿಸಬೇಕು. ಮಲ್ಲಿಕಾರ್ಜುನ ಪೂಜಾರಿ ಮಕ್ತಾಪುರ, ಪರಿಸರ ಪ್ರೇಮಿ ಸೂಚನಾ […]

ffff

February 2023
M T W T F S S
 12345
6789101112
13141516171819
20212223242526
2728  
%d bloggers like this: