ತೋತಾಪುರಿ ಟ್ರೇಲರ್’ಗೆ ಸುದೀಪ್ ಸಾಥ್                            

 

ಕಿಚ್ಚನ ಕೈಲಿ ತೋತಾಪುರಿ

ನವರಸ ನಾಯಕ ಜಗ್ಗೇಶ್ ನಟಿಸಿರುವ ‘ತೋತಾಪುರಿ’ ಸಿನಿಮಾದ ಟ್ರೇಲರ್ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ. ಈ ವರ್ಷದ ಬಹು ನಿರೀಕ್ಷಿತ ಸಿನಿಮಾ ಇದಾಗಿದ್ದು ಎರಡು ಭಾಗಗಳಲ್ಲಿ ಬಿಡುಗಡೆಯಾಗುತ್ತಿದೆ. ಈಗಾಗಲೇ ಪೋಸ್ಟರ್ ಹಾಗೂ ಹಾಡಿನ ಮೂಲಕ ವಿಶ್ವದಾದ್ಯಂತ ಸದ್ದು ಮಾಡಿರುವ ‘ತೋತಾಪುರಿ’ ಟ್ರೇಲರ್ ಏಪ್ರಿಲ್ 21ರಂದು ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಕಿಚ್ಚ ಸುದೀಪ್ ತೋತಾಪುರಿ ಟ್ರೇಲರ್ ರಿಲೀಸ್ ಮಾಡುವ ಮೂಲಕ ಚಿತ್ರತಂಡಕ್ಕೆ ಸಾಥ್ ನೀಡುತ್ತಿದ್ದಾರೆ.

ಜಗ್ಗೇಶ್ ಹಾಗೂ ನಿರ್ದೇಶಕ ವಿಜಯಪ್ರಸಾದ್ ಕಾಂಬಿನೇಷನ್’ನಲ್ಲಿ ಈಗಾಗಲೇ ‘ನೀರ್’ದೋಸೆ’ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿದೆ. ಇದೇ ಜೋಡಿ ಈಗ ‘ತೋತಾಪುರಿ’ ಮೂಲಕ ಕಮಾಲ್ ಮಾಡಲು ಹೊರಟಿದೆ. ಅನೂಪ್ ಸೀಳಿನ್ ಸಂಗೀತ ಸಂಯೋಜಿಸಿದ್ದು, ‘ಬಾಗ್ಲು ತೆಗಿ ಮೇರಿ ಜಾನ್’ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ನೂರೈವತ್ತು ಮಿಲಿಯನ್’ಗೂ ಅಧಿಕ ಹಿಟ್ಸ್ ದಾಖಲಿಸಿ ಮುನ್ನುಗ್ಗುತ್ತಿದೆ.

ಈ ವಾರ ‘ಕೆಜಿಎಫ್-2’ ವಿಶ್ವಾದ್ಯಂತ ತೆರೆಕಂಡಿದೆ. ಅದಾದ ಬಳಿಕ ಅತಿಹೆಚ್ಚು ಗಮನ ಸೆಳೆದಿರುವ ಸಿನಿಮಾಗಳ ಪೈಕಿ ಮೊದಲಿಗೆ ‘ತೋತಾಪುರಿ’ ಮೊದಲನೆಯ ಭಾಗ ರಿಲೀಸ್ ಆಗಲಿದೆ. ದೇಶ-ವಿದೇಶದಲ್ಲೂ ಹಾಡು ಗಮನ ಸೆಳೆದಿತ್ತು. ಈಗ ಟ್ರೇಲರ್ ಮೂಲಕ ಜಗತ್ತಿನಾದ್ಯಂತ ಮತ್ತಷ್ಟು ಸೌಂಡು ಮಾಡಲು ಚಿತ್ರತಂಡ ಸಜ್ಜಾಗಿದೆ.

ಜಗ್ಗೇಶ್ ಜೋಡಿಯಾಗಿ ಅದಿತಿ ಪ್ರಭುದೇವ ಇದ್ದಾರೆ. ‘ಡಾಲಿ’ ಧನಂಜಯ್, ಸುಮನ್ ರಂಗನಾಥ್, ದತ್ತಣ್ಣ, ವೀಣಾ ಸುಂದರ್, ಹೇಮ‍ದತ್ ಮೊದಲಾದವರ ತಾರಾಗಣ ಈ ಚಿತ್ರದಲ್ಲಿದೆ. ಸುರೇಶ್ ಅರಸ್ ಸಂಕಲನ, ನಿರಂಜನ್ ಬಾಬು ಕ್ಯಾಮೆರಾ ಕೆಲಸ ಈ ಚಿತ್ರಕ್ಕಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:
https://play.google.com/store/apps/details?id=com.nationaltv.kannada

Leave a Reply

Your email address will not be published. Required fields are marked *

Next Post

ನಾಗ ಚೈತನ್ಯಗೆ ಈ ನಟಿ ಮೇಲೆ ಪ್ಯರ‍್ಗೆ ಆಗಿದ್ಯಂತೆ.....

Thu Apr 21 , 2022
    ನಾಗಚೈತನ್ಯ ಹಾಗೂ ಟಿ ಸಮಂತಾ ತಮ್ಮ4 ವರ್ಷಗಳ ದಾಂಪತ್ಯ ಜೀವನಕ್ಕೆ ಗುಡ್ ಬೈ ಹೇಳಿದ್ದಾರೆ. ಆದರೆ ಈಗ ಡಿವೋರ್ಸ್ ಆಗಿ ಒಂದು ವರ್ಷದಲ್ಲೇ ಮತ್ತೊಂದು ಮದುವೆಗೆ ರೆಡಿಯಾಗುತ್ತಿದ್ದಾರಂತೆ ನಾಗಚೈತನ್ಯ. ಈ ರೀತಿಯ ಸುದ್ದಿಯೊಂದು ಸದ್ಯ ಟಾಲಿವುಡ್​ನಲ್ಲಿ ಹರಿದಾಡುತ್ತಿದೆ. ನಾಗ ಚೈತನ್ಯ ಹಾಗೂ ಸಮಂತಾ ಒಟ್ಟಿಗೆ ನಟಿಸಿದ್ದ ‘ಮಜಿಲಿ’ ಸಿನಿಮಾದಲ್ಲಿ ನಟಿಸಿದ್ದ ದಿವ್ಯಾಂಶಾ ಕೌಶಿಕ್ ಜೊತೆ ನಾಗ ಚೈತನ್ಯ ವಿವಾಹವಾಗಲಿದ್ದಾರೆ ಎನ್ನಲಾಗುತ್ತಿದೆ. ‘ಮಜಿಲಿ’ ಸಿನಿಮಾದಲ್ಲಿ ದಿವ್ಯಾಂಶಾ ಕೌಶಿಕ್, ನಾಗ […]

ffff

February 2023
M T W T F S S
 12345
6789101112
13141516171819
20212223242526
2728  
%d bloggers like this: