ಶಾಲಾ ಪಠ್ಯಪುಸ್ತಕದಲ್ಲಿ18 ನೇ ಶತಮಾನದ ವಿವಾದಿತ ದೊರೆ ಟಿಪ್ಪು ಸುಲ್ತಾನ್ ನನ್ನು ಅತಿಯಾಗಿ ವೈಭವೀಕರಿಸಲಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ, ಕರ್ನಾಟಕ ಸರಕಾರವು ಶಾಲಾ ಪಠ್ಯಪುಸ್ತಕದಲ್ಲಿ ಟಿಪ್ಪು ಸುಲ್ತಾನನನ್ನು ಚಿತ್ರಿಸಿರುವುದರ ಕುರಿತಂತೆ ಶೀಘ್ರದಲ್ಲಿಯೇ ಒಂದು ನಿರ್ಧಾರಕ್ಕೆ ಬರಲಿದೆ. ಲೇಖಕ ರೋಹಿತ್ ಚಕ್ರತೀರ್ಥ ಅವರ ನೇತೃತ್ವದ ಶಾಲಾ ಪಠ್ಯ ಪುಸ್ತಕ ಸಮಿತಿಗೆ, ರಾಜ್ಯದಲ್ಲಿ ಶಾಲಾ ಪಠ್ಯ ಪುಸ್ತಕಗಳನ್ನು ಪರಿಷ್ಕರಿಸುವ ಕಾರ್ಯವನ್ನು ವಹಿಸಲಾಗಿದೆ. ವರದಿಗಳು ತಿಳಿಸಿರುವ ಪ್ರಕಾರ, ಈ ಸಮಿತಿಯು ತನ್ನ ವರದಿಯನ್ನು ಕರ್ನಾಟಕ ಸರಕಾರಕ್ಕೆ ಈಗಾಗಲೇ ಸಲ್ಲಿಸಿದ್ದು, ಅದರಲ್ಲಿ ಮಾಡಲಾಗಿರುವ ಕೆಲವು ಶಿಫಾರಸ್ಸುಗಳಲ್ಲಿ, ಟಿಪ್ಪುವಿಗೆ ಸಂಬಂಧಿಸಿದ ಅಧ್ಯಾಯಗಳಲ್ಲಿ ಕೆಲವು ಸಂಗತಿಗಳನ್ನು ತೆಗೆದು ಹಾಕುವುದು ಕೂಡ ಒಂದಾಗಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.nationaltv.kannada