ಬಹು ನಿರೀಕ್ಷಿತ ‘ವಿಕ್ರಾಂತ್ ರೋಣ’ ರಿಲೀಸ್ ಯಾವಾಗ ಗೊತ್ತಾ?
3Dಯಲ್ಲಿ ಹೇಗಿರಲಿದೆ ಕಿಚ್ಚನ ಆರ್ಭಟ?
ರಿಲೀಸ್ ಆದ ‘ವಿಕ್ರಾಂತ್ ರೋಣ’ ಟೀಸರ್ಗೆ ಸಿನಿ ರಸಿಕರು, ಕಿಚ್ಚನ ಅಭಿಮಾನಿಗಳು, ಸಿನಿಮಾ ವಿಮರ್ಶಕರು ಮೆಚ್ಚುಗೆ ವ್ಯಕ್ತ ಪಡಿಸಿ, ಫುಲ್ ಮಾರ್ಕ್ಸ್ ನೀಡಿದ್ದಾರೆ. ಇನ್ನು 3Dಯಲ್ಲಿ ಕಿಚ್ಚನ ಅಬ್ಬರ ಹೇಗಿರಲಿದೆ ಅಂತ ನೋಡುವುದಕ್ಕೆ ಕಾಯುತ್ತಿದ್ದಾರೆ.
ಕಿಚ್ಚ ಸುದೀಪ್ ನಟನೆಯ ಬಹುನಿರೀಕ್ಷಿತ ‘ವಿಕ್ರಾಂತ್ ರೋಣ’ ಸಿನಿಮಾದ ಟೀಸರ್ ಬಿಡುಗಡೆ ಆಗಿದೆ. ಈ ಮೊದಲೇ ಘೋಷಿಸಿದಂತೆ ನಿನ್ನೆ ಬೆಳಗ್ಗೆ 9.55ಕ್ಕೆ ಟೀಸರ್ ರಿಲೀಸ್ ಬಿಡುಗಡೆ ಮಾಡಲಾಗಿದೆ. ಈ ಮೂಲಕ ಕಿಚ್ಚನ ಅಭಿಮಾನಿಗಳಿಗೆ ಯುಗಾದಿ ಗಿಫ್ಟ್ ನೀಡಿದೆ ಚಿತ್ರತಂಡ. ತಮಿಳಿನಲ್ಲಿ ಸಿಂಬು, ಮಲಯಾಳಂನಲ್ಲಿ ಮೋಹನ್ ಲಾಲ್, ಹಿಂದಿಯಲ್ಲಿ ಸಲ್ಮಾನ್ ಖಾನ್, ತೆಲುಗಿನಲ್ಲಿ ಮೆಗಾ ಸ್ಟಾರ್ ಚಿರಂಜೀವಿ ಹಾಗೂ ಇಂಗ್ಲಿಷ್ನಲ್ಲಿ ವೀರೇಂದ್ರ ಸೆಹ್ವಾಗ್ ಅವರು ‘ವಿಕ್ರಾಂತ್ ರೋಣ’ ಚಿತ್ರದ ಟೀಸರ್ ಬಿಡುಗಡೆ ಮಾಡಿದ್ದಾರೆ. ಇನ್ನು ಸಿನಿಮಾ ಜುಲೈ 28ರಂದು ರಿಲೀಸ್ ಆಗಲಿದೆ ಅಂತ ಟೀಸರ್ನಲ್ಲಿ ಹೇಳಲಾಗಿದೆ.
ವಿಕ್ರಾಂತ್ ರೋಣ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ ಮತ್ತು ಸಿನಿಮಾ ಯಾವಾಗ ಥಿಯೇಟರ್ಗಳಿಗೆ ಬರಲಿದೆ ಎಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿರುವಾಗ, ಎಲ್ಲರಿಗೂ ಗುಡ್ ನ್ಯೂಸ್ ಸಿಕ್ಕಿದೆ. ಬಹು ನಿರೀಕ್ಷಿತ ವಿಕ್ರಾಂತ್ ರೋಣ ಚಿತ್ರ ಜು.28ರಂದು ರಿಲೀಸ್ ಆಗಲಿದೆ ಎಂದು ಚಿತ್ರತಂಡ ರಿಲೀಸ್ ಡೇಟ್ ಬಹಿರಂಗ ಮಾಡಿದೆ.
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈ ಸಿನಿಮಾ ಈಗಾಗಲೇ ತೆರೆಕಂಡಿರಬೇಕಿತ್ತು. ಆದರೆ ಕೊವಿಡ್ ಕಾರಣದಿಂದ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿತ್ತು. ಇನ್ನೂ ವಿಕ್ರಾಂತ್ ರೋಣ ಚಿತ್ರದ ಟೀಸರ್ಗೆ ಸಿನಿ ರಸಿಕರು, ಕಿಚ್ಚ ಅಭಿಮಾನಿಗಳು, ಸಿನಿಮಾ ವಿಮರ್ಶಕರು ಮೆಚ್ಚುಗೆ ವ್ಯಕ್ತ ಪಡಿಸಿದ್ದು, ಫುಲ್ ಮಾರ್ಕ್ಸ್ ನೀಡಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.nationaltv.kannada