ಕಳೆದ ಜೂನ್ನಲ್ಲಿ ಅಮೆರಿಕ ರಾಯಭಾರ ಕಚೇರಿ ಹಾಗೂ ಕಾನ್ಸೂಲೇಟ್ ಗಳು ಭಾರತದಲ್ಲಿ ವೀಸಾ ಅನುಮೋದನೆ ಸಂದರ್ಶನಗಳನ್ನು ತಡವಾಗಿ ಆರಂಭಿಸಿತ್ತು, ಕಾರಣ ಕೋವಿಡ್ ಪರಿಸ್ಥಿತಿ. ಆ ಸಂದರ್ಭದಲ್ಲಿ ನಾವು ಅತಿ ಹೆಚ್ಚು ವಿದ್ಯಾರ್ಥಿ ವೀಸಾಗಳಿಗೆ ಅನುಮೋದನೆ ನೀಡಿದ್ದು ಅದರ ಸಂಖ್ಯೆ ಸುಮಾರು 62,000 ಗಳಷ್ಟಾಗಿತ್ತು, ಈ ಬಾರಿ ನಾವು ವಿಸಾ–ಸಂದರ್ಶನ ಪ್ರಕ್ರಿಯೆಯನ್ನು ಮೇ ಮಧ್ಯದಿಂದಲೇ ಮಾಡುತ್ತಿದ್ದು ಈ ಬಾರಿಯೂ ಅತಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿ ವಿಸಾ ನೀಡಲು ಮುಂದಾಗಿದ್ದಾರೆ. ಅದಕ್ಕಾಗಿ ಈ ಹಿಂದೆ ವೀಸಾ ನಿರಾಕರಿಸಿದ್ದ ಅಥವಾ ನಿರಾಕರಿಸಲ್ಪಟ್ಟಿದ್ದ ಜನರು ಈ ಬಾರಿ ಎರಡನೇ ಅಥವಾ ಮೂರನೇ ಸಂದರ್ಶನ ಪಡೆಯುವುದು ಅತ್ಯಂತ ಕಠಿಣವಾಗಿದೆ ಎಂದು ಡೋನ್ಲಾಡ್ ಹೇಳಿದ್ದಾರೆ.
ಈ ಸಂದರ್ಭದಲ್ಲಿ ಡೋನಾಲ್ಡ್ ಅವರು ತಮ್ಮ ನೀತಿಯ ಮಹತ್ವ ಕುರಿತು ಕ್ರಿಕೆಟ್ ಉದಾಹರಣೆ ಮೂಲಕ ತಿಳಿಸಿದ್ದು ಅದಕ್ಕಾಗಿ ಹೀಗೆ ಹೇಳಿದ್ದಾರೆ, “ನೀವು ಕ್ರಿಕೆಟ್ ಮೈದಾನದ ಕ್ರೀಸ್ ಮೇಲೆ ಕಾಲಿಡುವ ಮುಂಚೆಯೇ ಹಲವು ಯುವ ಕ್ರಿಕೆಟಿಗರು ತಾವು ಬೋಲ್ಡ್ ಆಗುವ ಬಗ್ಗೆ ಚಿಂತಿಸುತ್ತಿದ್ದಾರೆ. ಆದರೆ ಹಲವು ಯುವ ಕ್ರಿಕೆಟಿಗರು ತಾವು ಪಾದಾರ್ಪಣೆ ಮಾಡಿದ ಸಂದರ್ಭದಲ್ಲೇ ಮೊದಲ ಸಂದರ್ಶನದಲ್ಲೇ ಸಿಕ್ಸ್ ಬಾರಿಸಿ ಬಿಡುತ್ತಾರೆ, ಅದು ನಿಮಗೆ ವಿಸಾ ದೊರಕಲು ಉತ್ತಮ ಅವಕಾಶವಾಗಿರುತ್ತದೆ, ಹಾಗಾಗಿ ನಿಮಗೆ ಎರಡನೇ ಅಥವಾ ಮೂರನೇ ಅವಕಾಶ ಸಿಗಬಹುದೆಂಬುದರ ಕುರಿತು ಹೆಚ್ಚು ಚಿಂತಿಸಬೇಡಿ” ಎಂದಿದ್ದಾರೆ.
ಈ ಸಂದರ್ಭದಲ್ಲಿ ಅವರು ಭಾರತದಲ್ಲಿ ಹೆಚ್ ಮತ್ತು ಎಲ್ ಕೆಟಗರಿಗಳ ವಿಸಾಗಳಿಗೆ ಸಂಬಂಧಿಸಿದಂತೆ ಸಂದರ್ಶನ ಹಾಗೂ ಡ್ರಾಪ್ ಬಾಕ್ಸ್ ಕುರಿತು ಮಾಹಿತಿ ನೀಡಿದರು. ಮೊದಲ ಬಾರಿ ವಿಸಾಗೆ ಅರ್ಜಿ ಸಲ್ಲಿಸುವವರಿಗಾಗಿ B-1 ಮತ್ತು B-2 ವಿಸಾ ಸಂಬಂಧಿತ ಸಂದರ್ಶನಾದಿಗಳನ್ನು ಸೆಪ್ಟಂಬರ್ ಒಂದರಿಂದ ಆರಂಭಿಸಲಾಗುವುದೆಂದು ಡೋನಾಲ್ಡ್ ಹೇಳಿದ್ದಾರೆ. ಮುಂದಿನ ವರ್ಷದವರೆಗೆ ಅಮೆರಿಕವು ಸುಮಾರು 80,000 ವಿಸಾಗಳನ್ನು ಅನುಮೋದಿಸಲಿದ್ದು 2023 ರ ಮಧ್ಯದಿಂದ ಈ ಪ್ರಮಾಣ ಮತ್ತೆ ಈ ಹಿಂದೆ ಕೋವಿಡ್ ಪೂರ್ವದಲ್ಲಿದ್ದ ಗಾತ್ರಕ್ಕೆ ಶತಪ್ರತಿಶತದಷ್ಟು ಮರಳಲಿದೆ ಎಂಬ ಭರವಸೆ ವ್ಯಕ್ತಪಡಿಸಿದ್ದಾರೆ.