ಸ್ಯಾಂಡಲ್ವುಡ್ ನಲ್ಲಿ ಹೊಸಬರ ಸಿನಿಮಾಗಳಿಗೇನು ಕಡಿಮೆ ಇಲ್ಲ. ಈಗಾಗಲೇ ಹಲವು ಹೊಸ ಸಿನಿಮಾಗಳು ತೆರೆ ಕಂಡು ಯಶಸ್ಸುಗಳಿಸಿವೆ. ಇದರ ಜೊತೆಗೆ ಸಕ್ಸಸ್ ರೇಟ್ಗಿಂತ ಫೇಲ್ಯೂರ್ ರೇಟ್ ಹೆಚ್ಚಿದೆ. ಸ್ಯಾಂಡಲ್ವುಡ್ನಲ್ಲಿ ಹೊಸಬರ ಸಿನಿಮಾಗಳು ಸಕ್ಸಸ್ ಕಂಡಿರುವುದು ಬೆರಳಣಿಕೆಯಷ್ಟು ಸಿನಿಮಾಗಳು ಮಾತ್ರ. ಈ ಹಿಂದೆ ಮಹಿರ ಎಂಬ ಸಿನಿಮಾ ಬಂದಿತಲ್ಲ. ರಾಜ್ ಬಿ ಶೆಟ್ಟಿ ಚೈತ್ರಾ ಆಚಾರ್ ಸೇರಿದಂತೆ ಒಂದಷ್ಟು ಪ್ರತಿಭಾನ್ವಿತರು ನಟಿಸಿದ್ದ ತಾಯಿ ಮಗಳ ಹೋರಾಟದ ಕಥೆಯನ್ನು ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದ ನಿರ್ದೇಶಕ ಮಹೇಶ್ ಗೌಡ ಈ ಬಾರಿ ಯಾರು ಮಾಡಿರದ ಹೊಸ ಪ್ರಯತ್ನದ ಸಿನಿಮಾವೊಂದಕ್ಕೆ ಕೈ ಹಾಕಿದ್ದಾರೆ. ಅದರ ಮೊದಲ ಭಾಗವೆಂಬಂತೆ ಸಿನಿಮಾದ ಟೈಟಲ್ ಹಾಗೂ ಫಸ್ಟ್ ಲುಕ್ ನ್ನು ಯುಗಾದಿ ಹಬ್ಬದ ಸ್ಪೆಷಲ್ ಆಗಿ ರಿಲೀಸ್ ಮಾಡಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.nationaltv.kannada