ವೆಡ್ಡಿಂಗ್ ಶೂಟ್ ತಂದ ಆಪತ್ತು: ನದಿಯಲ್ಲಿ ಮುಳುಗಿ ಮದುಮಗ ಸಾವು..!

ಪೋಸ್ಟ್​​ ವೆಡ್ಡಿಂಗ್​ ಫೋಟೋಶೂಟ್​ ವೇಳೆ ಭಾರಿ ದುರಂತ ನಡೆದಿದೆ. ಫೋಟೋಶೂಟ್ ಸಮಯದಲ್ಲಿ ನದಿಯಲ್ಲಿ ಮುಳುಗಿ ಮದುಮಗ ಮೃತಪಟ್ಟಿದ್ದು, ಮದುಮಗಳು ಆಸ್ಪತ್ರೆಗೆ ದಾಖಲಾಗಿದ್ದಾಳೆ. ಕೇರಳದ ಕೋಯಿಕ್ಕೋಡ್ ಸಮೀಪದ ಕುಟ್ಟಿಯಾಡಿಯಲ್ಲಿ ಈ ಘಟನೆ ನಡೆದಿದೆ.

ಕಡಿಯಂಗಡ ಮೂಲದ ರೆಜಿಲ್ ಎಂಬಾತನೇ ಮೃತ ವ್ಯಕ್ತಿಯಾಗಿದ್ದು, ಈತನ ಪತ್ನಿ ಕಾರ್ತಿಕಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾರ್ಚ್​​ 14ರಂದು ರೆಜಿಲ್​ ಮತ್ತು ಕಾರ್ತಿಕಾ ಮದುವೆಯಾಗಿತ್ತು. ಪೋಸ್ಟ್​​ ವೆಡ್ಡಿಂಗ್​ ಫೋಟೋಶೂಟ್​ಗಾಗಿ ಕುಟ್ಟಿಯಾಡಿ ನದಿಗೆ ಬಂದಿದ್ದರು. ಈ ವೇಳೆ ಇಬ್ಬರೂ ನದಿಗೆ ಬಿದ್ದಿದ್ದಾರೆ.

ನದಿಗೆ ಬಿದ್ದ ಬಳಿಕ ಇಬ್ಬರ ಚೀರಾಟದ ಧ್ವನಿ ಕೇಳಿದ ಸ್ಥಳೀಯರು ದೌಡಾಯಿಸಿ ನದಿಗೆ ಹಾರಿ ಇಬ್ಬರನ್ನೂ ಹೊರತೆಗೆದಿದ್ದಾರೆ. ನಂತರ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ, ಅಷ್ಟರಲ್ಲೇ, ರೆಜಿಲ್ ಕೊನೆಯುಸಿರೆಳೆದಿದ್ದಾನೆ. ಇತ್ತ, ಅಸ್ವಸ್ಥ ಕಾರ್ತಿಕಾಳನ್ನು ಮಲಬಾರ್ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದ್ದು, ಆಕೆಯ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.

Leave a Reply

Your email address will not be published. Required fields are marked *

Next Post

ಸೊಳ್ಳೆ ಕಾಟದಿಂದ ಪಾರಾಗಲು ಇಲ್ಲಿದೆ ಸುಲಭ ಮನೆ ಮದ್ದು.

Tue Apr 5 , 2022
ಬೇಸಿಗೆ ಬಂತಂದ್ರೆ ಎಲ್ಲಿ ನೋಡಿದ್ರೂ ಸೊಳ್ಳೆಗಳ ಕಾಟ. ಸೊಳ್ಳೆ ಕಾಯಿಲ್‌ ಹಾಕಿದ್ರೂ ಪ್ರಯೋಜನವಾಗುವುದಿಲ್ಲ. ರಾತ್ರಿ ನಿದ್ದೆಯನ್ನೂ ಕೊಡದ ಸೊಳ್ಳೆಗಳನ್ನು ಓಡಿಸೋದೇ ಬಹುದೊಡ್ಡ ಸವಾಲು. ಎಲ್ಲೋ ಮೂಲೆಯಲ್ಲಿ ಅಡಗಿಕೊಂಡು ಲೈಟ್‌ ಆಫ್‌ ಆದಾಕ್ಷಣ ಬಂದು ಕಚ್ಚಿ ರಕ್ತ ಹೀರೋ ಸೊಳ್ಳೆಗಳನ್ನು ಓಡಿಸಲು ಕೆಲವೊಂದು ಮನೆ ಮದ್ದುಗಳಿವೆ. ಅವ್ಯಾವುದು ಅಂತ ನೋಡೋಣ. ಬೆಳ್ಳುಳ್ಳಿ ರಸ : ಮೊದಲನೆಯದಾಗಿ ಸೊಳ್ಳೆಗಳನ್ನು ಓಡಿಸಲು ನೀವು ಬೆಳ್ಳುಳ್ಳಿಯನ್ನು ಬಳಸಬಹುದು. ಕೆಲವು ಬೆಳ್ಳುಳ್ಳಿ ಎಸಳುಗಳನ್ನು ಜಜ್ಜಿ ನೀರಿನಲ್ಲಿ ಕುದಿಸಿ. ಅದನ್ನು […]

ffff

February 2023
M T W T F S S
 12345
6789101112
13141516171819
20212223242526
2728  
%d bloggers like this: