ಬಿಸಿಲಿನ ಪ್ರಖರತೆ ಹೆಚ್ಚಾಗುತ್ತಲಿದ್ದು, ನಗರಸಭೆ ಹಾಗೂ ಗ್ರಾಮ ಪಂಚಾಯಿತಿ ಅಧೀನದಲ್ಲಿನ ಪ್ರದೇಶಗಳಲ್ಲಿ ಜಾನುವಾರು ಹಾಗೂ ಪಕ್ಷಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು.
ಹಳ್ಳಿಗಳಲ್ಲಿ ಬಸ್ ನಿಲ್ದಾಣ ಹಾಗೂ ಇನ್ನಿತರ ಕಡೆ ನೀರಿನ ತೊಟ್ಟಿ ನಿರ್ಮಿಸಿದರೆ ಅನುಕೂಲವಾಗುತ್ತದೆ.
ಅಲ್ಲದೆ, ಹಳ್ಳಿ ಹಾಗೂ ನದಿ ಪಾತ್ರದಲ್ಲಿನ ಪ್ರದೇಶಗಳಲ್ಲಿ ಕೃಷಿಗೆ ನೀರು ಸೆಳೆದುಕೊಳ್ಳಬಾರದು. ಇದರಿಂದ ಜಲಚರಗಳಿಗೆ ತೊಂದರೆ ಆಗುತ್ತದೆ. ಈ ಬಗ್ಗೆ ಅಧಿಕಾರಿಗಳು ಗಮನಹರಿಸಬೇಕು.
ಮಲ್ಲಿಕಾರ್ಜುನ ಪೂಜಾರಿ ಮಕ್ತಾಪುರ, ಪರಿಸರ ಪ್ರೇಮಿ
ಸೂಚನಾ ಫಲಕ ಅಳವಡಿಸಿ
ಯಾದಗಿರಿ: ಶಹಾಪುರ ತಾಲ್ಲೂಕಿನ ಕೊನೆಯ ಹಳ್ಳಿ ಮುಡಬೂಳದಲ್ಲಿ ಹಾದು ಹೋಗಿರುವ ಬೀದರ್- ಶ್ರೀರಂಗಪಟ್ಟಣ ರಾಜ್ಯ ಹೆದ್ದಾರಿಯಲ್ಲಿ ಯಾವುದೇ ಸೂಚನಾ ಫಲಕಗಳು ಇಲ್ಲದೇ ಮಾಹಿತಿ ಕೊರತೆ ಉಂಟಾಗಿದೆ.
ಜಿಲ್ಲೆಗೆ ಕಲಬುರಗಿ ಕಡೆಯಿಂದ ಬರುವ ಮುಡಬೂಳ ಗ್ರಾಮದ ಸಮೀಪ ಯಾದಗಿರಿ ಜಿಲ್ಲೆ ಪ್ರಾರಂಭವೆಂದು ತೋರಿಸುವ ನಾಮಫಲಕ ಹರಿದು ನಾಲ್ಕು ವರ್ಷಗಳಾದರೂ ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯದಿಂದ ಇನ್ನೂ ಅಳವಡಿಸಿಲ್ಲ.
ಈ ಹೆದ್ದಾರಿ ಮೇಲೆ ಕಲಬುರಗಿಯ ಕಡೆಯಿಂದ ಮಹಾರಾಷ್ಟ್ರ, ಆಂಧ್ರಪ್ರದೇಶ, ರಾಜಸ್ತಾನ, ಗುಜರಾತ್, ವಿಜಯಪುರ ಕಡೆಯಿಂದ ಬರುವ ಪ್ರಯಾಣಿಕರಿಗೆ ಯಾದಗಿರಿ ಜಿಲ್ಲೆಗೆ ಪ್ರವೇಶವೆಂದು ನಾಮಫಲಕ ಇದ್ದರೆ ಪ್ರಯಾಣಿಕರಿಗೆ ಅನುಕೂಲವಾಗತ್ತದೆ. ಜಿಲ್ಲೆಯ ಗಡಿ ಬಗ್ಗೆ ತಿಳಿಯುತ್ತದೆ. ತಕ್ಷಣವೇ ಸಂಬಂಧ ಪಟ್ಟ ಅಧಿಕಾರಿಗಳು ಜಿಲ್ಲಾಗಡಿ ನಾಮಫಲಕದತ್ತ ಗಮನಹರಿಸಬೇಕು.
ಅಶೋಕ ಮಲ್ಲಾಬಾದಿ, ನಿವಾಸಿ
ಅಕ್ರಮ ಮರಳು ನಿಯಂತ್ರಿಸಿ
ಯಾದಗಿರಿ: ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಅಕ್ರಮವಾಗಿ ಮರಳು ಸಾಗಣಿಕೆ ನಡೆಯುತ್ತಿದ್ದು, ಇದಕ್ಕೆ ಕಡಿವಾಣ ಇಲ್ಲದಂತೆ ಆಗಿದೆ.
ಕೃಷ್ಣಾ ನದಿಯ ಒಡಲನ್ನು ಒಗೆದು ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದೆ. ಹಳ್ಳ, ಕೊಳ್ಳಗಳು ಇದರಿಂದ ನಾಶವಾಗಿವೆ. ಅಲ್ಲದೇ ಅಂತರ್ಜಲ ಮಟ್ಟವೂ ಕ್ಷೀಣವಾಗಿವೆ. ನಿಗದಿತಗಿಂತ ಅಧಿಕ ಭಾರದ ಲಾರಿಗಳು ಹಳ್ಳಿ, ನಗರದಲ್ಲಿ ಸಂಚಾರ ಮಾಡುತ್ತಿದ್ದು, ರಸ್ತೆಗಳ ತುಂಬ ಗುಂಡಿ ಬಿದ್ದಿವೆ.
ಸಂಬಂಧಿಸಿದ ಕಂದಾಯ, ಪೊಲೀಸ್, ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿಗಳು ಅಕ್ರಮ ಮರಳು ತಡೆಗಟ್ಟಬೇಕು.
ಶರಣಗೌಡ ಮೇಲಿನಮನಿ, ನಿವಾಸಿ
ವಿದ್ಯುತ್ ತಂತಿ ಸ್ಥಳಾಂತರಿಸಿ
ಕಕ್ಕೇರಾ: ಸಮೀಪದ ನಿಂಗಾಪುರ ಸರ್ಕಾರಿ ಶಾಲಾ ಕಟ್ಟಡದ ಮೇಲೆ ವಿದ್ಯುತ್ ತಂತಿ ಹಾದು ಹೋಗಿದೆ.
ನೂರಾರು ಶಾಲಾ ಮಕ್ಕಳು ತರಗತಿಗಳಲ್ಲಿ ಕುಳಿತು ಪಾಠ ಕೇಳುತ್ತಾರೆ. ಕಟ್ಟಡದ ಮೇಲೆ ವಿದ್ಯುತ್ ತಂತಿಯ ಸಂಪರ್ಕ ಕಲ್ಪಿಸಲಾಗಿದೆ. ಮೇಲ್ಛಾವಣಿ ಮೇಲಿಂದ ಕೈಎತ್ತಿದರೇ ತಾಗುವಂತಿದೆ. ವಿದ್ಯುತ್ ತಂತಿ ಬೇರೊಂದು ಕಡೆ ವರ್ಗಾಯಿಸುವಂತೆ ಮುಖ್ಯ ಶಿಕ್ಷಕರು ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಕೂಡಲೇ ಸಂಬಂಧಪಟ್ಟ ಜೆಸ್ಕಾಂ
ಅಧಿಕಾರಿಗಳು ಇತ್ತ ಗಮನಹರಿಸಬೇಕು.
ಭೈರಣ್ಣ ಎಸ್. ಲಿಂಗದಳ್ಳಿ, ನಿವಾಸಿ
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.nationaltv.kannada