ಈಗಾಗಲೇ ದೇಶಾದ್ಯಂತ ಅನೇಕ ಭಾಷೆಗಳಲ್ಲಿ ಬಿಡುಗಡೆಯಾಗಿದ್ದು, ಗಲ್ಲಾ ಪೆಟ್ಟಿಗೆಯಲ್ಲಿ ಭಾರಿ ಹಣವನ್ನು ಗಳಿಸುತ್ತಿದೆ ಎಂದು ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ. ಈ ಕೆಜಿಎಫ್ ಚಾಪ್ಟರ್ 2 ಚಿತ್ರದ ಹವಾ ಎಷ್ಟರ ಮಟ್ಟಿಗೆ ಜನರನ್ನು ಆವರಿಸಿದೆ ಎಂದರೆ ಬಹುತೇಕರು ಈ ಚಿತ್ರದ ಬಗ್ಗೆ ಮಾತಾಡುತ್ತಿದ್ದಾರೆ. ಇದು ಬರಿ ಅಭಿಮಾನಿಗಳವರೆಗೆ ಮಾತ್ರ ಸೀಮಿತವಾಗಿಲ್ಲ. ಈ ಚಿತ್ರದ ಹವಾ ಬಾಲಿವುಡ್ನಟ ನಟಿಯರನ್ನು ಒಮ್ಮೆ ಕನ್ನಡ ಚಿತ್ರರಂಗದ ನಟ ರಾಕಿಂಗ್ ಸ್ಟಾರ್ ಯಶ್ಕಡೆಗೆ ತಿರುಗಿ ನೋಡುವಂತೆ ಮಾಡಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.
ಕಂಗನಾ ರಣಾವತ್, ಯಾವಾಗಲೂ ದಕ್ಷಿಣದ ತಾರೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಏಕೆಂದರೆ ಬಾಲಿವುಡ್ ಅವರಿಂದ ಕಲಿಯುವುದು ಬಹಳಷ್ಟಿದೆ ಎಂದು ಅವರು ನಂಬುತ್ತಾರೆ. ಇತ್ತೀಚೆಗೆ, ಕಂಗನಾ ಅವರು ತಮ್ಮ ಸಾಮಾಜಿಕ ಮಾಧ್ಯಮವಾದ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಒಂದು ಪೋಸ್ಟ್ ಅನ್ನು ಹಂಚಿಕೊಂಡರು. ಅವರು ತಮ್ಮ ಸಂಸ್ಕೃತಿಯಲ್ಲಿ ‘ಆಳವಾಗಿ ಬೇರೂರಿದ್ದಾರೆ’ ಎಂದು ಉಲ್ಲೇಖಿಸಿದ್ದಾರೆ. ತಮ್ಮ ಮುಂದಿನ ಪೋಸ್ಟ್ನಲ್ಲಿ ಅವರು ಕೆಜಿಎಫ್ ಚಾಪ್ಟರ್ 2 ಚಿತ್ರದಲ್ಲಿ ನಟಿಸಿದ ಯಶ್ ಅವರನ್ನು ತುಂಬಾನೇ ಹೊಗಳಿದ್ದಾರೆ.
ಯಶ್ ಹೊಸ ಆ್ಯಂಗ್ರಿ ಯಂಗ್ ಮ್ಯಾನ್ ಎಂದ ಕಂಗನಾ!
ಅವರನ್ನು ‘ಆ್ಯಂಗ್ರಿ ಯಂಗ್ ಮ್ಯಾನ್’ ಎಂದು ಹೇಳಿದ್ದಾರೆ ಮತ್ತು ಭಾರತವು ಅನೇಕ ದಶಕಗಳಿಂದ ಇಂತಹ ಒಬ್ಬ ವ್ಯಕ್ತಿಯನ್ನು ಮಿಸ್ ಮಾಡಿಕೊಂಡಿತ್ತು ಎಂದು ಹೇಳಿದರು ಮತ್ತು ಯಶ್ ಅವರನ್ನು ಕಂಗನಾ ಅವರು ಬಾಲಿವುಡ್ ದಿಗ್ಗಜ ನಟ ಬಿಗ್ ಬಿ ಅಮಿತಾಭ್ ಬಚ್ಚನ್ ಅವರೊಂದಿಗೆ ಹೋಲಿಸಿದ್ದಾರೆ. ಹೇಗೆ ಈ ಬಾಲಿವುಡ್ ನ ಹಿರಿಯ ನಟ 70 ಮತ್ತು 80 ರ ದಶಕದಲ್ಲಿ ‘ಆ್ಯಂಗ್ರಿ ಯಂಗ್ ಮ್ಯಾನ್’ ಎಂಬ ಲೇಬಲ್ಗೆ ಸಮಾನಾರ್ಥಕವಾಗಿ ಮಾರ್ಪಟ್ಟಿದ್ದರು ಎಂದು ಸಹ ಹೇಳಿದ್ದಾರೆ.