ಇಂದಿನ ಯುವಜನತೆ ಅತಿಹೆಚ್ಚು ಇಷ್ಟಪಡೋದು ಜಂಕ್ ಫುಡ್….. ಪಿಜ್ಜಾ, ಬರ್ಗರ್, ಚಾಲೋಲೇಟ್, ಕೇಕ್, ಎಣ್ನೆಯಲ್ಲಿ ಕರಿಯುವ ತಿಂಡಿಗಳಾದ ವಿಧ ವಿಧದ ಚಿಪ್ಸ್ಗಳು, ಗೋಬಿ ಮಂಚೂರಿ, ಪಾನಿಪೂರಿ ಮತ್ತಿತರ ಬೇಕರಿ ತಿನಿಸುಗಳಿಗೆ ಅತಿಯಾಗಿ ಅಡಿಕ್ಟ್ ಆಗಿರುವವರೇ ಹೆಚ್ಚಾಗಿದ್ದಾರೆ ನಮ್ಮಲ್ಲಿ… ನಮ್ಮ ಭಾರತೀಯರು ಎಲ್ಲದರಲ್ಲೂ ವೆರೈಟೀಸ್ ಹುಡುಕುತ್ತಾರೆ.. ಹಾಗೇ ಫುಡ್ ನಲ್ಲೂ ಅದರಲ್ಲೂ ಜಂಕ್ ಫುಡ್ ನಲ್ಲಿ ವೆರೈಟಿ ವೆರೈಟಿ ಹುಡುಕುತ್ತಾರೆ…. ಇದರಿಂದಲೇ ಮನೆಯಿಂದ ಹೊರಗೆ ಹೋದರೆ ಸಾಕು ಎಲ್ಲಾ ಸ್ಟ್ರೀಟ್ ಗಳಲ್ಲಿ, ಹೋಟೆಲ್ ಗಳಲ್ಲಿ ವಿದವಿಧದ ಆಹಾರ ತಿಂಡಿ ತಿನಿಸುಗಳನ್ನು ಕಾಣಬಹುದು…..ಅಂತೆಯೇ ಅಷ್ಟೇ ಪ್ರಮಾಣದ ಜನರನ್ನೂ ಕಾಣಬಹುದು…
ಈಗಂತೂ ಕೇಳೋ ಹಾಗೇ ಇಲ್ಲ ….. ಚಳಿಯ ವಾತಾವರಣಕ್ಕೆ ಇನ್ನಷ್ಟು ಹೊರಗೆ ತಿನ್ನುವವರ ಸಂಖ್ಯೆ ಜಾಸ್ತಿಯೇ ಇರುತ್ತದೆ…. ಆ ಕ್ಷಣಕ್ಕೆ ರುಚಿಯಾಗಿ ತಿನ್ನುವುದನ್ನು ಮಾತ್ರ ನೋಡುತ್ತೇವೆ… ಆದರೆ ಅದರಿಂದಾಗುವ ದುಷ್ಪರಿಣಾಮಗಳ ಬಗ್ಗೆ ಚಿಂತಿಸುವುದೇ ಇಲ್ಲ…. ಈ ಜಂಕ್ ಫುಡ್ ಸೇವನೆಯಿಂದ ಅನೇಕ ಆರೋಗ್ಯ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ… ಎಂಬುದು ಗೊತ್ತಿದ್ದರೂ ಬಾಯಿ ಚಪಲ ತಡೆಯಲಾಗದೆ ತಿನ್ನಬೇಕು ಎನಿಸಿದ್ದನ್ನು ತಿಂದು ಬಿಡುತ್ತಾರೆ… ಈ ರೀತಿಯ ಅನಾರೋಗ್ಯಕರ ಆಹಾರ ಪದ್ಧತಿಯಿಂದ ಚಿಕ್ಕವಯಸ್ಸಿನಲ್ಲೇ ಸ್ಥೂಲಕಾಯತೆ, ಹೃದಯ ಸಮಸ್ಯೆ, ಶುಗರ್, ಡಯಾಬಿಟಿಸ್, ಫ್ಯಾಟಿ ಲಿವರ್, ಕ್ಯಾನ್ಸರ್ ನಂತಹ ಕಾಯಿಲೆಗಳಿಗೆ ಕಾರಣವಾಗುತ್ತದೆ…. ಆದ್ದರಿಂದ ಯುವಜನತೆ ಆದಷ್ಟು ಜಂಕ್ ಫುಡ್ ನ್ನು ತಪ್ಪಿಸಿ, ಎಚ್ಚೆತ್ತುಕೊಂಡು ಆರೋಗ್ಯದ ಕಾಳಜಿ ವಹಿಸಬೇಕಾದ ಅಗತ್ಯವಿದೆ…. ಪ್ರತಿನಿತ್ಯ ಆರೋಗ್ಯಕರ ಆಹಾರಪದ್ದತಿಯನ್ನು ರೂಢಿಸಿಕೊಳ್ಳಬೇಕಾಗಿದೆ….