ಹಿಂದೂಗಳಲ್ಲಿ ಹಲವು ಹಬ್ಬಗಳಿವೆ, ಆದರೆ ಯುಗಾದಿ ಹಬ್ಬ ಬಹಳ ವಿಶೇಷವಾದ ಮತ್ತು ಮುಖ್ಯವಾದ ಹಬ್ಬ. ಏಕೆಂದರೆ ಯುಗಾದಿ ಹಬ್ಬವು ಹಿಂದೂಗಳಿಗೆ ಹೊಸವರ್ಷದ ಮೊದಲ ದಿನವಾಗಿರುತ್ತೆ. ಹಿಂದೂಗಳು ಹೊಸಸಂಕಲ್ಪಗಳನ್ನು ಹಾಕಿಕೊಂಡು ಮುಂದೆ ನಡೆಯುವ ದಿನ ಇದು.
ಯುಗಾದಿ ಎಂಬ ಪದ ಸಂಸ್ಕೃತದ ಯುಗ ಮತ್ತು ಆದಿ ಎಂಬ ಎರಡು ಪದಗಳಿಂದ ಕೂಡಿದೆ. ಈ ಯುಗಾದಿಯು ಕೃತಯುಗದ ಚೈತ್ರ ಶುದ್ಧ ಪಾಡ್ಯ ತಿಥಿ ದಿನದಂದು ಪ್ರಾರಂಭವಾಯಿತು ಎಂಬ ಇತಿಹಾಸ ಇದೆ. ಬೇವು-ಬೆಲ್ಲ ಸೇವಿಸಬೇಕು. ಬೇವಿನ ಎಲೆಗಳನ್ನು ಸೇವಿಸುವುದರಿಂದ ಸರ್ವ ಅನಿಷ್ಟಗಳು ನಾಶವಾಗುತ್ತೆ ಎಂದು ನಂಬಲಾಗುತ್ತೆ. ಬೆಲ್ಲ ಸಂತೋಷದ ಸಂಕೇತವಾಗಿರುತ್ತೆ. ಇವೆರೆಡು ಮನುಷ್ಯ ಜೀವನದ ಕಷ್ಟ-ಸುಖದ ಪ್ರತೀಕವಾಗಿದೆ.
ಪುರಾಣದ ಪ್ರಕಾರ ಯುಗದಿ ದಿನದಂದು ಬ್ರಹ್ಮ ದೇವನು ಸೃಷ್ಟಿಯ ಕಾರ್ಯ ಆರಂಭಿಸಿದನೆಂಬ ಪ್ರತೀತಿಯಿದೆ. ಅಂದಿನಿಂದಲೇ ವರ್ಷ, ಖುತುಗಳು, ಮಾಸಗಳು, ಗ್ರಹಗಳು, ನಕ್ಷತ್ರಗಳು ಸೃಷ್ಟಿಸಿದನೆಂಬ ನಂಬಿಕೆಯಿದೆ.
ಹಿಂದಿನ ವರ್ಷದ ಸಾಧನೆಗಳನ್ನು ಪರಿಶೀಲಿಸಿ, ಈ ವರ್ಷ ನಾವು ಯಾವ ರೀತಿ ಕಾರ್ಯಪ್ರವೃತ್ತರಾಗಬೇಕು ಎಂದು ಯೋಜನೆ ಹಾಕಿಕೊಳ್ಳುವ ದಿನ ಇಂದು.
ಜೀವನದಲ್ಲಿ ಕಹಿ ಸಿಹಿ ಎರಡನೂ ಸರಿ ಸಮವಾಗಿ ಅನುಭವಿಸುತ್ತ ಬೇವು ಬೆಲ್ಲ ತಿಂದು ಹಬ್ಬವನ್ನು ಆಚರಿಸೋಣ
ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಶುಭಶಯಗಳು
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.nationaltv.kannada