ಸದಾಭಿರುಚಿ ಸಿನಿಮಾಗಳನ್ನು ಪ್ರೇಕ್ಷಕರಿಗೆ ಉಣ ಬಡಿಸ್ತಿರುವ ಪ್ರತಿಷ್ಠಿತ ಒಟಿಟಿ ಸಂಸ್ಥೆ ಜೀ5 ಈ ವರ್ಷದ ಮತ್ತೊಂದು ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ ಏಕ್ ಲವ್ ಯಾ ಚಿತ್ರವನ್ನು ಪ್ರೇಕ್ಷಕರ ಮಡಿಲಿಗೆ ಹಾಕಲಿದೆ.
ಏಪ್ರಿಲ್ 8ರಿಂದ ಜೀ5ನಲ್ಲಿ ಏಕ್ ಲವ್ ಯಾ
ಶೋಮ್ಯಾನ್ ಜೋಗಿ ಪ್ರೇಮ್ ನಿರ್ದೇಶನದಲ್ಲಿ ಮೂಡಿ ಬಂದಿದ್ದ, ರಕ್ಷಿತಾ ಅವರ ಸಹೋದರ, ಹೊಸಪ್ರತಿಭೆ ರಾಣಾ ನಾಯಕನಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ಏಕ್ ಲವ್ ಯಾ ಸಿನಿಮಾ ಫೆಬ್ರವರಿ 24ರಂದು ಅದ್ಧೂರಿಯಾಗಿ ತೆರೆಗಪ್ಪಳಿಸಿತ್ತು. ಬಾಕ್ಸ್ ಆಫೀಸ್ನಲ್ಲಿ ಸೌಂಡ್ ಮಾಡಿದ್ದ ಏಕ್ ಲವ್ ಯಾ ಸಿನಿಮಾದಲ್ಲಿ ಕೊಡಗಿನ ಕುವರಿ ರೀಷ್ಮಾ ನಾಣಯ್ಯ ಹಾಗೂ ರಚಿತಾ ರಾಮ್ ರಾಣಾಗೆ ಜೋಡಿಯಾಗಿ ನಟಿಸಿದ್ದರು. ಪ್ರೀತಿ ಜೊತೆ ಒಂದೊಳ್ಳೆ ಸಂದೇಶ ನೀಡಿದ್ದ ಮ್ಯೂಸಿಕಲ್ ಹಿಟ್ ಸಿನಿಮಾ ಏಕ್ ಲವ್ ಯಾ ಸಿನಿಮಾ ಏಪ್ರಿಲ್ 8 ರಿಂದ ಜೀ5 ಒಟಿಟಿಯಲ್ಲಿ ಪ್ರೀಮಿಯರ್ ಆಗ್ತಿದೆ.
ಚರಣ್ ರಾಜ್, ಶಶಿಕುಮಾರ್, ಸೂರಜ್, ‘ಶಿಷ್ಯ’ ದೀಪಕ್ ಸೇರಿದಂತೆ ದೊಡ್ಡ ತಾರಾ ಬಳಗ ನಟಿಸಿದ್ದ ಏಕ್ ಲವ್ ಯಾ ಸಿನಿಮಾವನ್ನು ರಕ್ಷಿತಾ ತಮ್ಮದೇ ರಕ್ಷಿತಾ ಫಿಲ್ಮಂ ಫ್ಯಾಕ್ಟರಿ ಬ್ಯಾನರ್ ನಡಿ ನಿರ್ಮಾಣ ಮಾಡಿದ್ದರು. ಅರ್ಜುನ್ ಜನ್ಯ ಸಂಗೀತ, ಮಹೇನ್ ಸಿಂಹ ಕ್ಯಾಮೆರಾ ಕೈಚಳಕದ ಏಕ್ ಲವ್ ಯಾ ಸಿನಿಮಾ ಜೀ 5 ಒಟಿಟಿಗೆ ಕೊಡ್ತಿದ್ದು, ಥಿಯೇಟರ್ ನಲ್ಲಿ ನೋಡಲಾಗದವರು ಮನೆಯಲ್ಲಿ ಕುಳಿತು ಸಿನಿಮಾ ನೋಡಿ ಎಂಜಾಯ್ ಮಾಡಿ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.nationaltv.kannada